ರಾಯಚೂರು ಜಿಲ್ಲಾ ಉತ್ಸವ; ಕವನಗಳಲ್ಲಿ ಸಾಮಾಜಿಕ ಕಳಕಳಿ ಇರಲಿ
ಜಿಲ್ಲಾ ಉತ್ಸವ ನಿಮಿತ್ತ ರಾಯಚೂರಿನ ಮಹಿಳಾ ಸಮಾಜದಲ್ಲಿ ಗುರುವಾರ ಆಯೋಜಿಸಿದ್ದ ಕವಿಗೋಷ್ಠಿಯನ್ನು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಉದ್ಘಾಟಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ, ಹಿರಿಯ ಸಾಹಿತಿಗಳಾದ ಬಿ.ಜಿ.ಹುಲಿ, ಅಯ್ಯಪ್ಪಯ್ಯ ಹುಡಾ, ವೀರಹನುಮಾನ, ಕಸಾಪ ತಾಲೂಕಾಧ್ಯಕ್ಷ ಬಿ.ವಿಜಯ ರಾಜೇಂದ್ರ, ತಹಸೀಲ್ದಾರ್ ಪರಶುರಾಮ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಸಲಹೆ
ಗದ್ಯ-ಕಾವ್ಯಕ್ಕೆ ವ್ಯತ್ಯಾಸವಿದೆ
ರಾಯಚೂರು: ಸಮಾಜ ತಿದ್ದುವ ಹಾಗೂ ಜನರಿಗೆ ಮುದ ನೀಡುವ ಕವನಗಳು ಕವಿಗಳಿಂದ ಮೂಡಿಬರಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ಜಿಲ್ಲಾ ಉತ್ಸವ ನಿಮಿತ್ತ ನಗರದ ಮಹಿಳಾ ಸಮಾಜದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಯುವಕವಿಗಳು ಸಮಾಜಕ್ಕೆ ಪ್ರಯೋಜನವಾಗುವ ಕವನಗಳನ್ನು ರಚಿಸಬೇಕು ಎಂದರು.
ಸಾಹಿತಿ ಚಿದಾನಂದ ಸಾಲಿ ಮಾತನಾಡಿ, ಗದ್ಯ-ಕಾವ್ಯಕ್ಕೆ ವ್ಯತ್ಯಾಸವಿದೆ. ದೊಡ್ಡ ತತ್ವಗಳನ್ನು ಚಿಕ್ಕ ಸಾಲಿನಲ್ಲಿ ಹಿಡಿದಿಡುವ, ಕವಿಯ ನುಡಿಗಳು ಜನ ಸಮುದಾಯ ನುಡಿ, ರಾಯಚೂರು ಜಿಲ್ಲೆಗೆ ಕವಿಗಳು, ಸಾಹಿತಿಗಳ ಕೊಡುಗೆ ಅಪಾರ. ಹಲವಾರು ಕಥೆ, ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಶಸ್ತಿ ದೊರೆತಿವೆ ಎಂದರು.
ಪಂಪಾಪತಿ ಶಾಸ್ತ್ರಿ ಅವರು ಪ್ರಥಮ ಕವನ ವಾಚನದಲ್ಲಿ ರಾಯಚೂರು ಜಿಲ್ಲೆಯ ಇತಿಹಾಸ ಹಾಗೂ ಪ್ರಸಿದ್ಧ ದೇವಸ್ಥಾನ, ಪ್ರವಾಸಿ ತಾಣಗಳು, ಕವಿಗಳ ಬರಹ ತಿಳಿಸಿದರು. ಮಲ್ಲಣ್ಣ ಹರವಾಳ ಅವರು ದೇಶಕ್ಕೆ ಏನಾಗಿದಿಯೋ, ಕೋಮ ಗಲಭೆ, ಅತ್ಯಾಚಾರ ಹೆಚ್ಚಾಗಿದ್ದು, ಶಾಂತಿ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ಮಹಾದೇವ ಪಾಟೀಲ್ ಅವರು, ಗಜಲ್ನಲ್ಲಿ ಪ್ರೇಮ ಷರಾ ಬರೆದು ಬಿಡು ಎಂದು ಹೇಳಿದರು. ಖಾನಸಾಬ್ ಮೊಮಿನ್ ಅವರು ಮನಸ್ಸಿನ ವೇದನೆ ತಿಳಿಸಿದರು. ಏಮ್ಸ್ ಹೋರಾಟ ಕುರಿತು ರಾಮಣ್ಣ ಭೋಯರ ಕವನ ವಾಚಿಸಿದರು. 85ನೇ ವಯಸ್ಸಿನಲ್ಲಿಯೂ ಶ್ಯಾಮಸುಂದರ ಪಟವಾರಿ ಅವರು ಕವನ ವಾಚಿಸಿ ಯುವಕರಿಗೆ ಸ್ಫೂರ್ತಿಯಾದರು.
ಜಯಮ್ಮ ಶರಣಯ್ಯ ರಾಯಚೂರು ಇತಿಹಾಸ ನುಡಿದರು. 50ಕ್ಕೂ ಹೆಚ್ಚಿನ ಕವಿಗಳು ತಮ್ಮ ಕವನ ವಾಚನ ಮಾಡಿದರು.
ಹಿರಿಯ ಸಾಹಿತಿ ಗಿರಿರಾಜ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ, ಹಿರಿಯ ಸಾಹಿತಿಗಳಾದ ಬಿ.ಜಿ.ಹುಲಿ, ಅಯ್ಯಪ್ಪಯ್ಯ ಹುಡಾ, ವೀರಹನುಮಾನ, ಕಸಾಪ ತಾಲೂಕಾಧ್ಯಕ್ಷ ಬಿ.ವಿಜಯ ರಾಜೇಂದ್ರ, ತಹಸೀಲ್ದಾರ್ ಪರಶುರಾಮ ಇದ್ದರು.